Wednesday, July 3, 2013

ಓ ನನ್ನ ಓಡತಿ.......

ಓ ನನ್ನ ಓಡತಿ...... ನನ್ನೊಳಗಿನ ತೇಜೋಮೂರ್ತಿ.....ಜನ್ಮ ಜನ್ಮಗಳಿಗೂ....ನೀನೇ ನನ್ನ ಸಂಗಾತಿ....

ಪ್ರೀತಿಯ ರುಚಿಶುಚಿಯನ ಪರಚಯಿಸಿ, ನೋವಿನ ಕಹಿಯ ಕಂಪಲ್ಲಿ ಬಾಳುವೆಯಾ....
ಕೀರ್ತಿಯ ಮುನ್ನೋಟವನ ಮುನ್ನೆಡಿಸಿ, ಹೆಮ್ಮೆಯ ಬಾಳಲ್ಲಿ ಮೆರೆವುವೆಯಾ...
ಜೀವನದ ಗೆಲಿವಿನ ಗದ್ದುಗೆ ಏರಿಸಿ, ಸೋಲಿನ ಮುಳ್ಳನ್ನ ಹಿಡಿದು  ಕಾದಿರುವೆಯಾ....
ಸಾವಿನ ಯಮ ಪಾಶನವನ ಮುಕ್ತಗೊಳಿಸಿ, ಉಸಿರಿಂದ ಹೆಸರು ಬರೆದಿಟ್ಟೆಯಾ.....

ಓ ನನ್ನ ಓಡತಿ...... ನನ್ನೊಳಗಿನ ತೇಜೋಮೂರ್ತಿ.....ಜನ್ಮ ಜನ್ಮಗಳಿಗೂ....ನೀನೇ ನನ್ನ ಸಂಗಾತಿ....!!

My Daddy........... I Resembles Dad.....


Tuesday, July 2, 2013

ನೀ .... ಎಷ್ಟು ಇಷ್ಟ ...

ಬಾನಲಿನ ಚಿಕ್ಕ ಚುಕ್ಕೆಗಳ ಅಸ್ಟು, ಇಷ್ಟ..
ಈ ನನ್ನ ಬಾಳಲ್ಲಿ....!
ಬೆಲೂನಿನ ಚೌಕದಲ್ಲಿ ತುಂಬಿ ಹಿಡಿಯದಷ್ಟು, ಇಷ್ಟ ..
ಈ ನನ್ನ ಒಲವಲ್ಲಿ....!
ಸಾಗರನ ಆಳವನ್ನ ಇಣುಕಿ ನೋಡದಷ್ಟು, ಇಷ್ಟ
ಈ ನನ್ನ ಕಣ್ಣಲ್ಲಿ ....!
ನಿನ್ನನ ನೋಡಿ ಪಡೆದ ಇಷ್ಟ ಕಷ್ಟ ದಷ್ಟು, ಇಷ್ಟ
ಈ ನನ್ನ ನನ್ನಲ್ಲಿ ..! 

ಜೋಕಾಲಿ ಯಾಡಲೇ ನನ್ನ ಕೂಸೆ,

ಜೋಕಾಲಿ ಯಾಡಲೇ ನನ್ನ ಕೂಸೆ, 
ಹಾಡಲ್ಲೆ ನೋಡ್ಹೆ ಪಡೆಯುವ ಕನಸು....
ನೀ ಎಂಧಿಗೂ ನನ್ನ ಪ್ರೀತಿಯ ನನಸು...
ಹೃದಯ ತೆಗೆದು  ತಲೆದಿಂಬು ಆಗಿಡಲೇ ನನ್ನ ಕೂಸೆ,
ಜೋಲಿ ತುಂಬಿ ಇರಲು ಹರುಳುವ ಚುಕ್ಕೆಗಳ ಸೊಗಸು..
ನೀ ನಿದ್ಹೆ ಮಾಡು ಮನಸ್ಸೇ ...ನನ್ನ ಮುದ್ಹಿನ ಕೂಸೆ..

ನೀ ಯಾರು ಕಣೆ...?

ಕಣ್ಣಲ್ಲಿ ಕಣ್ಣಿಟ್ಟು ಕಣ್ಣು ತುಂಬಾ..... ನಾ ಕಾಣೆ 
ನೀ ಯಾರು ಕಣೆ...?
ನನ್ನಲ್ಲಿ ನನ್ನನ್ನ ನನ್ನ ನಾನೆ..... ನಾ ಮರ್ತೆ
ನೀ ಹಾಡಿದ  ಮಾತೇನೆ....?
ಅಣುವು ಅಣುವು ಹೆಣೆದ ಹಣೆಯ ಮೇಲೆ 
ನಾ ಹೊಣೆ ..... ನೀ ನೆನೆಸಿ ಕನಸೇನೆ ...?
ನೀ ಯಾರು ಕಣೆ... ನೀ ಯಾರು ಕಣೆ.....
ನೀ ಎಂದೆಂದಿಗೂ ನನ್ನೊಂದಿಗೇ ಇರು ಕಣೆ...

ಏನು ಹೇಳಲಿ..... ನಾನೇನು ಹೇಳಲಿ....!

ಮನುಷ್ಯನಾಗಿ ಅಮಾನುಷವಾಗಿ ಹುಟ್ಟುಗಮ್ಯವನ್ನು ಮರೆತು ಸಾವಿನ ನಡೆಗೆ ಮುನ್ನಡೆಯುವ ಮನುಜ ಕುಲಕ್ಕೆ....... ಏನು ಹೇಳಲಿ..... ನಾನೇನು ಹೇಳಲಿ....!
ನೀತಿ, ನ್ಯಾಯ, ಧರ್ಮ, ಸತ್ಯಗಳನ್ನು ಮರೆಮಾಚಿ ಸ್ವಾರ್ಥ, ಕೋಪ, ಅಸೂಯೆ, ಸಾರ್ವಭೌಮತ್ವಗಲಿಗಾಗಿ ತಾನೊಂದು ಬುದ್ಧಿಜೀವಿಯೆಂದು ಮರೆತು ನಿರ್ಜೀವಿಯಾಗಿ ಬಾಳುತ್ತಿರುವ ಮನುಜ ಕುಲಕ್ಕೆ..... ಏನು ಹೇಳಲಿ....ನಾನೇನು ಹೇಳಲಿ......!!
ಕುಲ, ಜಾತಿಧರ್ಮಭೇದಗಳನ್ನು ಮರೆತು ಪ್ರೀತಿವಿಶ್ವಾಸನಂಬಿಕೆತ್ಯಾಗಗಳನ್ನು ಬೆಳೆಸಿದರೆ... ನೀ 
ಮನುಷ್ಯನಾಗಲ್ಲವೇ, ಮನುಜ ಕುಲಕ್ಕೆ ಆದರ್ಶ ಪುರುಷನಾಗಲ್ಲವೇ..... ಏನು ಹೇಳಲಿ.... ಮುಂದೇನು ಹೇಳಲಿ.....!!!
ಹೆಣ್ಣು, ಹೊನ್ನು, ಮಣ್ಣುನ್ನು ತೊರೆದು, ಕಾಮ, ಕ್ರೋದ, ದ್ವೇಷಗಳನ್ನು ಜಯಸಿದರೆ......ನೀ
ಯುಗಪುರುಷನಾಗಲ್ಲವೇ.... ಮನುಜ ಕುಲಕ್ಕೆ ವರ್ಷಗಳ ಹರ್ಷ ತರುವವನಾಗಲ್ಲವೇ......!!!!

ಏನು ಹೇಳಲಿ..... ಮುಂದೇನು ಹೇಳಲಿ..... ಮನುಜ ಕುಲವು ತನ್ನಲ್ಲಿ ತಾನೇ..... ಅಂತವಾಗದಿರಲಿ......!!!!!

ನಾ ಮಾತಾಡಲೇ.... ನಾ ಮಾತಾಡಲೇ.

ನಾ ಮಾತಾಡಲೇ.... ನಾ ಮಾತಾಡಲೇ... ನನ್ನೊಳಗಿನ ಮಾತು ಬಿಚ್ಚಿಡಲೇ
ಪ್ರತಿ ಹೊತ್ತು ಮತ್ತೇರುವ ಮುತ್ತಿನ ಮಾತುಗಳ್ನಹೊತ್ತಿಗೆಯೊಳಗೆ ಒತ್ತಿ ಅಚ್ಚುಕಿಸಲೇ
ಅತ್ತ ಇತ್ತ ಕಾಣದೆ ಗೊಣಗಿದ ಮಾತುಗಳ್ನ, ಗಂಧ ಚೆಂದದ ಅಂದದೊಳಗೆ ಗಮ್ಮತ್ತು ಮುಚ್ಚಿಡಲೇ
ಸುತ್ತ ಮುತ್ತ ಕಾಡಿದ ವಿಷಾದ ಮಾತುಗಳ್ನವಿಷ ಹುತ್ತದೊಳಗೆ ವಿಪತ್ತು ಕಚ್ಚಿಬಿಡಲೇ

ಮತ್ತೆ ಮತ್ತೆ ಮಾತಿನ ಬುತ್ತಿ ಹೊತ್ತು, ಒಲವಿನ ಹೊಳಪು ನಿನ್ನೊಳಗೇ ತುಂಬಿ ಬಿಡಲೇ...!!!

Vajpayee